

25th November 2025

ನೇಸರಗಿ- ಸಂಪನ್ಮೂಲ ಕೇಂದ್ರ ಹಣಬರಹಟ್ಟಿ
ಮಾಸ್ತಮರ್ಡಿ ಗ್ರಾಮದಲ್ಲಿ ಹಣಬರಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಅದ್ದೂರಿಯಾಗಿ ಜರುಗಿತು.
2025-26 ನೇ ಸಾಲಿನ ಹಣಬರಹಟ್ಟಿ ಕ್ಲಸ್ಟರ ಹಂತದ ಪ್ರತಿಭಾ ಕಾರಂಜಿ /ಕಲೋತ್ಸವ ಕಾರ್ಯಕ್ರಮವನ್ನು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಹಾನಂದಾ ಪಾಣಿ ಎಸ್.ಡಿ.ಎಮ್.ಸಿ.ಅಧ್ಯಕ್ಷರು ಶ್ರೀಮತಿ ಲಕ್ಕವ್ವಾ ಕಡಬಿ ವಣ್ಣೂರ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಟಿ.ಎ.ಪಿ.ಸಿ.ಎಮ್.ಎಸ್.ನಿರ್ದೇಶಕರು ಬೈಲಹೊಂಗಲ.ಇವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು. ರವಿ ಹಿರೇಮಠ ಕ್ಷೇತ್ರ ಸಮನ್ವಯಾಧಿಕಾರಿಗಳು ಬೈಲಹೊಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಎಸ್.ಬಿ.ಸಂಗನಗೌಡರ ಸಿ.ಆರ್.ಪಿ ಹಣಬರಹಟ್ಟಿ ಕಾರ್ಯಕ್ರಮವನ್ನು ಆಯೋಜಿಸಿ ಕಾರ್ಯಕ್ರಮದ ಕುರಿತು ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆಯಾಗಿದೆ.ಮಕ್ಕಳು ಅರಳುವ ಕುಸುಮಗಳು ಅವುಗಳಿಗೆ ಸೂಕ್ತ ವೇಳೆಯಲ್ಲಿ ವೇದಿಕೆ ನಿರ್ಮಿಸಿ ಪ್ರತಿಭೆಯನ್ನು ಹೋರಹಾಕಲು ಎಲ್ಲ ಶಿಕ್ಷಕರು - ಪಾಲಕರು ಹಾಗೂ ಸಮಾಜದ ಜವಾಬ್ದಾರಿಯನ್ನು ತಿಳಿಸಿದರು.ಸರಕಾರಿ ಶಾಲೆಗಳು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಕಾಳಜಿ ವಹಿಸಿವೆ ಎಂದು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಶ್ರೀಮತಿ ಎಸ್.ಎಸ್.ಜುಜನ್ನವರ ಸಹ ಶಿಕ್ಷಕಿಯರನ್ನು ಹಾಗೂ ತಾಲೂಕಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದಕ್ಕೆ ಶ್ರೀಎಸ್.ಎಸ್. ನೀಲನ್ನವರ ಸಹ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಹೇಶ ಯರಗಟ್ಟಿ ಇ.ಸಿ.ಓ ಬೈಲಹೊಂಗಲ,ಶ್ರೀ ಸಂತೋಷ ಪಾಟೀಲ ಉಪಾದ್ಯಕ್ಷರು ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘ ಬೈಲಹೊಂಗಲ ಎಸ್.ಆಯ್.ಮಿರ್ಜನ್ನವರ ಜಿಲ್ಲಾ ದೈಹಿಕ ಸಂಘದ ಅಧ್ಯಕ್ಷರು ,ಶ್ರೀ ಡಿ.ಎಮ್.ನಾಯ್ಕರ ಮುಖ್ಯೊಪಾಧ್ಯಯರು ಸರಕಾರಿ ಪ್ರೌಢ ಶಾಲೆ ಮಾಸ್ತಮರ್ಡಿ. ಚಿದಾನಂದ ವಾರಿ ಜಿಲ್ಲಾ ಎನ್.ಪಿ.ಎಸ್. ಸಂಘದ ಅಧ್ಯಕ್ಷರು ,ಶ್ರೀ ರಾಜು ಖೋತ ಮುಖ್ಯೊಪಾಧ್ಯಯರು ಸರಕಾರಿ ಪ್ರೌಢ ಶಾಲೆ ವಣ್ಣೂರ. ಮಲ್ಲೇಶಪ್ಪಾ ಚಿಕೋಡಿ ,
ವಾಯ್.ಎಮ್ .ಚಿಕ್ಕೋಪ್ಪ ಶಿಕ್ಷಣ ಪ್ರೇಮಿಗಳು,ಸಿದ್ದಮಲ್ಲಪ್ಪಾ ತಳವಾರ,ಸಿದ್ದಪ್ಪಾ ಹುಣಶೀಕಟ್ಟಿ ಊರಿನ ಶಿಕ್ಷಣ ಪ್ರೇಮಿಗಳು ಧಾನಿಗಳು ಮಕ್ಕಳ ಕಾರ್ಯಕ್ರಮಕ್ಕೆ ತನು-ಮನದಿಂದ ಸಹಾಯ ಮಾಡಿದರು. ಬಿ.ಕೆ ನ್ಯೂಜ್ ಸುದ್ದಿ ವಾಹಿಣಿ ಸಂಪಾದಕರಾದ ಭೀಮಶೆನ ಕಮ್ಮಾರ. ಅಡವಯ್ಯ ಕುಲಕರ್ಣಿ ಹಾಜರಿದ್ದರು. ಸಂತೋಷ ಸಿದ್ದಯ್ಯನವರ ಸಹ ಶಿಕ್ಷಕರು ಮಂಜುನಾಥ ಚೋಬಾರಿ ಪ್ರಧಾನ ಗುರುಗಳು ಮಾಸ್ತಮರ್ಡಿ ಸ್ವಾಗತಿಸಿದರು.ಶ್ರೀಮತಿ ಗೌರವ್ವಾ ಕೋಣಿನವರ ಮತ್ತು ಸಂತೋಷ ಸಿದ್ದಯ್ಯನವರ ಸಹ ಶಿಕ್ಷಕರು,ನಿರೂಪಿಸಿದರು. ಸಂತೋಷ ಚೀಟೀನ ವಂದಿಸಿದರು

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025